ಉದಿಸುವುದೆಂದು ಶ್ರೀಮಲೆ ಮೇಲೆ  ತೇಜೋನಕ್ಷತ್ರ 

(ಸ್ವಾಮಿಯೇ ಶರಣಂ )

ಬರುತಿದೆ ನೋಡು ಅರಸುತ ನಿನ್ನ ಭಕ್ತರಹೋ ಯಾತ್ರ 

(ಅಯ್ಯಪ್ಪ ಶರಣಂ) ||

ನಮಗಿಹುದೊಂದೇ ನಿನ್ನಾಶ್ರಯವು ಸರಿಸದಿರು ಮಾತ್ರ ||

|| ಉದಿಸುವುದೆಂದು ||

ಕಲಿಯುಗ ವರದ ಬ್ರಹ್ಮಚಾರಿ ಬರುವೆವು ನಿನ್ನೆಡೆಗೆ ||

ಕಲಿಯುಗ ಪೂರ್ತಿ ಕರಿಮಲೆ ಮೇಲೆ ಸೇರಿಸಿಕೋ ಬಳಿಗೆ ||

ಪಾದವ ಬಿಡೆವು ಬೇರೆಡೆ ಇರೆವು||  

ಭಕ್ತ ಜನ ಪ್ರಿಯನೇ |

|| ಉದಿಸುವುದೆಂದು ||

ಇರುಮುಡಿಯೊಂದೇ ತಂದೆವು ತಂದೇ ನಿಯಮಗಳ ಮಾಡಿ||  ಕರುಣಾಮಯನೇ ನಿನ್ನನು ಕಾಣಲು ನಡೆದೂ ನಿನ್ನೆಡೆಗೆ ||

ಹರಿಹರ ನಂದನ ಭಕ್ತರ ಚೇತನ ||

ಸೇರಿಸು ಶ್ರೀ ಮಲೆಗೆ |

|| ಉದಿಸುವುದೆಂದು ||