|| ರಾಘವೇಂದ್ರ ಕೃಪಾ ಸಾಗರ

ಶ್ರೀಗುರು ರಾಘವೇಂದ್ರಾ 

ಪರಿಪಾಲಿಸೋ ರಾಘವೇಂದ್ರ 

ರೋಗಹರನೇ ಕೃಪಾ ಸಾಗರ 

ಶ್ರೀಗುರು ರಾಘವೇಂದ್ರ 

ರಾಘವೇಂದ್ರ ರಾಘವೇಂದ್ರಾ ||


ರೋಗಹರನೇ ಕೃಪಾ ಸಾಗರ ಶ್ರೀ ಗುರು

ರಾಘವೇಂದ್ರ ಪರಿಪಾಲಿಸೋ ||

||ರೋಗಹರನೇ ||

ಸಂತತ ದುರ್ಮತ ಧ್ವಾಂತ ದಿವಾಕರ||

ಸಂತವಿನುತ ಮಾತ ಲಾಲಿಸೋ ||

||ರೋಗಹರನೇ ||

ಪಾವನಗಾತ್ರ ಸುದೇವವರನೇ ತವ ||

ಸೇವಕ ಜನರೊಳಗಾಡಿಸೋ ||

||ರೋಗಹರನೇ ||

ಘನ್ನಮಹಿಮ ಜಗನ್ನಾಥ ವಿಠಲಪ್ರಿಯ ||

ನಿನ್ನಾರಾಧನೆ ಮಾಡಿಸೋ ||

||ರೋಗಹರನೇ ||

 ***