ಈಶನಂದನಾ ಭೂಸುರ ಪ್ರಿಯ

ಜಗದೀಶ ಮಲ್ಲೇಶ ವಾಸುಕಿಪ್ರಿಯ ||

ಈ ಪರಿ ನಿನ್ನಾ ನಾಮಸ್ಮರಣೆಯಾ

ಹಾಡುತ ನಿನ್ನಾ ತೂಗುವೆನಯ್ಯ || 

|| ಈಶನಂದನಾ ||

ಚಿನ್ನದ ಬಟ್ಟಲಲಿ ಹಾಲ ನೀಡುವೆ ||

ರನ್ನದಾ ತೊಟ್ಟಿಲಲಿ ನಿನ್ನ ತೂಗುವೆ ||

ಮಲ್ಲಿಗೆ ಮಾಲೆಯ ನಿನಗೆ ತೊಡಿಸುವೆ ||

ಕರ್ಪೂರದಾರತಿಯ ನಿನಗೆ ಬೆಳಗುವೆ ||

|| ಈಶ ನಂದನಾ ||

ಸಕಲದೇವರಾ ದೇವ ಷಣ್ಮುಖ ||

ಭಕ್ತವತ್ಸಲಾ ಭಾಗ್ಯಸಂಪದ ||

ಭಕ್ತಿಯಿಂದಲಿ ಪೂಜಿಪೆ ನಿನ್ನಾ ||

ಶಕ್ತಿಯ ನೀಡಿ ರಕ್ಷಿಸುವೆ ನಮ್ಮ ||

|| ಈಶ ನಂದನಾ ||

ಶರವಣಭವನೇ ಸುಬ್ಬರಾಯನೇ ||

ಕರವ ಮುಗಿವೆನು ಕಾರ್ತಿಕೇಯನೇ ||

ಕರುಣೆಯಿಂದಲೀ ಕಾಯೊ ಗುಹನೇ ||

ವರವ ನೀಡುವಾ ವರಕುಮಾರನೇ ||

|| ಈಶ ನಂದನಾ || 


***